ಬೆಂಗಳೂರು : ನಗರದ ಮಹಾರಾಣಿ ಕ್ಲಸ್ಟರ್ ವಿವಿಯ ವತಿಯಿಂದ ಮಹಾರಾಣಿ ಕಲಾ ಮಹಾವಿದ್ಯಾಲಯದ ಪ್ರಾಂಗಣದಲ್ಲಿ ಆಯೋಜಿಸಿದ ಶಿಕ್ಷಕರ ದಿನಾಚರಣೆಯನ್ನು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಗೌರವಾನ್ವಿತ ಕುಲಪತಿಗಳಾದ ಡಾ. ಅಶೋಕ ಎಸ್.ಬಿ, ಆಡಳಿತ ಕುಲಸಚಿವೆ ಶ್ರೀಮತಿ ಸೀಮಾ ಬಿ. ನಾಯಕ್, ಮೌಲ್ಯಮಾಪನ ಕುಲಸಚಿವ ಪ್ರೊ. ವೈ. ರಮೇಶ್, ಆಡಳಿತ ಉಪಕುಲಸಚಿವ ಪ್ರೊ. ಎಲ್.ಎಚ್. ಶಿವಶಂಕರಪ್ಪ, ಪ್ರೊ. ಮುನಿವೆಂಕಟಪ್ಪ, ಪ್ರೊ. ಕುಶಲ ಇನ್ನಿತರ ಗಣ್ಯರು ಸೇರಿ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಅಶೋಕ ಎಸ್.ಬಿ ಅವರು ನಮ್ಮ ವಿವಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಭಾರತದ ಪ್ರಸಿದ್ಧ ತತ್ವಜ್ಞಾನಿ, ಮಹಾನ್ ಶಿಕ್ಷಣ ತಜ್ಞರು, ದೇಶದ 2ನೇ ರಾಷ್ಟ್ರಪತಿಗಳಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿಕೊಂಡು ಅತ್ಯಂತ ಸಡಗರ ಮತ್ತು ಗೌರವದಿಂದ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಡಾ. ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಭೂತಪೂರ್ವ ಕೊಡುಗೆಯನ್ನು ಗೌರವಿಸಲು ಅವರ ಹುಟ್ಟಿದ ದಿನವನ್ನು ಶಿಕ್ಷಕರ ದಿನವನ್ನಾಗಿ ವೈಯಕ್ತಿಕವಾಗಿ ಆಚರಿಸುವ ಬದಲು, ದೇಶದ ಎಲ್ಲಾ ಶಿಕ್ಷಕರಿಗೆ ಸಮರ್ಪಿಸಿದ್ದು ಇತಿಹಾಸದಲ್ಲಿ ದಾಖಲೆಯಾಗಿದ್ದು ಸಂತಸ ಎಂದರು.
ಎಲ್ಲಾ ವಿದ್ಯಾರ್ಥಿಗಳು ಸಮಯ ಪಾಲನೆ ಮಾಡಿಕೊಂಡು ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಸಿದ್ಧತೆ ಮಾಡಬೇಕು ಇದಕ್ಕಾಗಿ ಬೇಕಾದ ಲೈಬ್ರರಿ ಪುಸ್ತಕ ಸಾಮಗ್ರಿಗಳನ್ನು ನನ್ನ ಅವಧಿಯಲ್ಲಿ ಫೈನಲ್ ಮಾಡಿ ಹೋಗುತ್ತೇನೆ. ಮುಂಬರುವ ದಿನಗಳಲ್ಲಿ ಪ್ರೊ. ಮಮತ ಅವರು ಬಂದು ಕಾರ್ಯರೂಪಕ್ಕೆ ತರುತ್ತಾರೆ ಎಂದರು.

ನಾನು ಗ್ರಾಮೀಣ ವಿದ್ಯಾರ್ಥಿಯಾದಾಗ ಇಂಗ್ಲಿಷ್ ಭಾಷೆ ಬಾರದೇ ಭಾಷೆ ಕಷ್ಟದ ಅನುಭವಿಸಿದ ದಿನಗಳನ್ನು ನೆನಪು ಮಾಡಿಕೊಂಡು ಬದುಕು ಅಷ್ಟು ಸುಲಭವಲ್ಲ. ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಗಳು ಕನಸು ಕಾಣಬೇಕು, ರಾತ್ರಿ ಮಲಗುವ ಸಮಯದಲ್ಲಿ ಕನಸು ಕಾಣಬಾರದು ಎಂದರು.
ಪ್ರಮುಖವಾಗಿ ವಿವಿಯ ವಸತಿ ನಿಲಯದ ಡಾ. ಬಿ.ಆರ್.ಅಂಬೇಡ್ಕರ್ ಡಿಜಿಟಲ್ ಲೈಬ್ರರಿ ಸದ್ಯದಲ್ಲೇ ಆರಂಭಿಸಲಾಗುತ್ತದೆ. ಪ್ರತಿಯೊಬ್ಬರೂ ಯಾವುದೇ ಕಾರ್ಯಕ್ರಮವನ್ನು ವಾಲೆಂಟರಿಯಾಗಿ ಎಲ್ಲ ರೀತಿಯ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು ಸಲಹೆ ನೀಡಿದರು.
ನಂತರ ಆಂಗ್ಲ ಭಾಷಾ ವಿಭಾಗದ ಪ್ರಾಧ್ಯಾಪಕ ಡಾ. ಶಿವಕೋಟಿ ಮಾತನಾಡಿ, ಸಮಾಜವನ್ನು ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ಅಂತಹ ಮಾರ್ಗದರ್ಶಕರಿಗೆ ಗೌರವ ಹಾಗೂ ಕೃತಜ್ಞತೆ ಸಲ್ಲಿಸಲು ಇದು ಸೂಕ್ತವಾದ ದಿನವಾಗಿದೆ ಎಂದರು.
ಪ್ರಪಂಚದ ಎಲ್ಲ ಭಾಗಗಳಲ್ಲಿ ವಿವಿಧ ದಿನಾಂಕದಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆದರೆ ನಮ್ಮ ದೇಶದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ತಮಿಳುನಾಡಿನ ಹುಟ್ಟಿ ಬೆಳೆದ ಬಂದು, ಭಾರತ ಅಭಿವೃದ್ಧಿಯಲ್ಲಿ ಇವರ ಸೇವೆಯ ನೆನಪಿಗಾಗಿ ಇವರ ಹುಟ್ಟಿದ ದಿನವನ್ನು ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಮಹಾರಾಣಿ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಕುಶಲ ಮಾತನಾಡಿ, ಜಗತ್ತಿನ ಶ್ರೇಷ್ಠ ಕಾರ್ಯಗಳಲ್ಲಿ ಶಿಕ್ಷಕ ವೃತ್ತಿಯು ಅಗ್ರಸ್ಥಾನ ಪಡೆದಿದ್ದು, ಬಹುಕಾಲದಿಂದಲೂ ಗುರು-ಶಿಕ್ಷಕರ ಸಂಪ್ರದಾಯ ನಡೆದುಕೊಂಡು ಬಂದಿದ್ದು, ನಮ್ಮ ಪೋಷಕರು ನಮ್ಮ ಮೊದಲ ಗುರುಗಳಾಗಿರುತ್ತಾರೆ. ಏಕೆಂದರೆ ಅವರು ನಮಗೆ ಜಗತ್ತನ್ನು ತೋರಿಸಿದ್ದಾರೆ. ಅವರ ಸ್ಥಾನವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಶಿಕ್ಷಕರ ಕುರಿತು ಸಂಗೀತ ಕಾರ್ಯಕ್ರಮಗಳು ಮತ್ತು ಭಕ್ತಿ ಗೀತೆಗಳನ್ನು ಹಾಡಿದರು. ಮಹಾರಾಣಿ ಮಹಿಳಾ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಆರ್.ಕೆ. ವಾಣಿಶ್ರೀ ಅವರು ಸ್ವಾಗತ, ನಿರೂಪಣೆಯನ್ನು ಲತಾ ಮತ್ತು ವಂದನಾರ್ಪಣೆಯನ್ನು ಡಾ ಚೆಂದನ ಎಚ್.ಎಸ್. ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಪ್ರೊ. ಎಸ್.ಡಿ. ನಾಗೇಂದ್ರ, ಮೌಲ್ಯಮಾಪನ ಉಪಕುಲಸಚಿವ ಶ್ರೀನಾಥ್ ರಾಜ್ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯ ಸಂತೋಷ್ ರೆಡ್ಡಿ, ವಿತ್ತಾಧಿಕಾರಿ ಎಂ.ಎಸ್. ಚೇತನ್ ಕುಮಾರ್, ಶ್ರೀಮತಿ ರಮ್ಯಾ ರಮೇಶ್, ಸ್ಕೂಲ್ ಆಫ್ ಹೋಂ ಸೈನ್ಸ್ ನ ನಿರ್ದೇಶಕಿ ಪ್ರೊ. ಮಮತಾ ಬಿ, ಸ್ಕೂಲ್ ಆಫ್ ಕಾಮರ್ಸ್ ಅಂಡ್ ಮೇನೇಜ್‌ಮೆಂಟ್ ನ ನಿರ್ದೇಶಕ ಪ್ರೊ. ಮುನಿವೆಂಕಟಪ್ಪ, ಸ್ಕೂಲ್ ಆಫ್ ಸೈನ್ಸ್ ನ ನಿರ್ದೇಶಕಿ ಪ್ರೊ. ಅರುಣ್ ಜ್ಯೋತಿ ಮಥಾಯಸ್, ಮಹಾರಾಣಿ ಮಹಿಳಾ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಆರ್.ಕೆ. ವಾಣಿಶ್ರೀ, ವಿ.ಎಚ್.ಡಿ ಗೃಹ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ವಜೀಹಾ ಸುಲ್ತಾನ, ಪ್ರೊ. ಕುಶಲ, ಪ್ರೊ. ಶ್ರೀಧರ್, ಡಾ. ಮೀರಾ, ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ವಿವಿಧ ವಿಷಯಗಳ ಉಪನ್ಯಾಸಕರು, ವಿದ್ಯಾರ್ಥಿ ವೃಂದವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಎಲ್ಲಾ ವಿದ್ಯಾರ್ಥಿಗಳು ಸಮಯ ಪಾಲನೆ ಮಾಡಿಕೊಂಡು ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಸಿದ್ಧತೆ ಮಾಡಬೇಕು, ಇದಕ್ಕಾಗಿ ಬೇಕಾದ ಲೈಬ್ರರಿ ಪುಸ್ತಕ ಸಾಮಗ್ರಿಗಳನ್ನು ನನ್ನ ಅವಧಿಯಲ್ಲಿ ಫೈನಲ್ ಮಾಡಿ ಹೋಗುತ್ತೇನೆ. ಮುಂಬರುವ ದಿನಗಳಲ್ಲಿ ಪ್ರೊ. ಮಮತಾ ಬಿ, ಅವರು ಬಂದು ಕಾರ್ಯರೂಪಕ್ಕೆ ತರುತ್ತಾರೆ.
ಡಾ. ಅಶೋಕ ಎಸ್.ಬಿ, ಕುಲಪತಿಗಳು, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಬೆಂಗಳೂರು
ಡಾ. ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಭೂತಪೂರ್ವ ಕೊಡುಗೆಯನ್ನು ಗೌರವಿಸಲು ಅವರ ಹುಟ್ಟಿದ ದಿನವನ್ನು ಶಿಕ್ಷಕರ ದಿನವನ್ನಾಗಿ ವೈಯಕ್ತಿಕವಾಗಿ ಆಚರಿಸುವ ಬದಲು, ದೇಶದ ಎಲ್ಲಾ ಶಿಕ್ಷಕರಿಗೆ ಸಮರ್ಪಿಸಿದ್ದು ಇತಿಹಾಸದಲ್ಲಿ ದಾಖಲೆಯಾಗಿದೆ.