ಕೂಡ್ಲಿಗಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡ್ಲಿಗಿ ತಾಲೂಕು ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಪಟ್ಟಣದ ರಾಮನಗರ, ಬಾಪೂಜಿನಗರ, ಅಂಬೇಡ್ಕರ್ ನಗರ,ಕಾರ್ಯಕ್ಷೇತ್ರದ ಶ್ರೀ ಹೇಮಾವತಿ ಜ್ಞಾನ ವಿಕಾಸ ಕೇಂದ್ರದ ಮಹಿಳೆಯರಿಗೆ ಮದುಮಗಳ ಶೃಂಗಾರ ತರಬೇತಿ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎಚ್.ಎಂ. ಸಚಿನ್ ಕುಮಾರ್ ಮಾತನಾಡಿ, ಮಹಿಳೆಯರು ಬ್ಯೂಟಿಪಾರ್ಲರ್ ನಂತಹ ಕೌಶಲ್ಯಾಧಾರಿತ ತರಬೇತಿ ಪಡೆದು ಸ್ವಾವಲಂಬಿಗಳಾಗಬೇಕು. ಇಂತಹ ತರಬೇತಿಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಉದ್ಯೋಗ ಹಾಗೂ ಆದಾಯ ಗಳಿಕೆಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.

ಮಹಿಳೆಯರಿಗೆ ಮದುಮಗಳ ಶೃಂಗಾರ, ಅಲಂಕಾರ ಸೇರಿದಂತೆ ವಿವಿಧ ಕೌಶಲ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತರಬೇತಿಯ ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಯೋಜನಾಧಿಕಾರಿ ಸಂತೋಷ್, ಜ್ಞಾನವಿಕಾಸ ತಾಲೂಕು ಸಮನ್ವಯಾಧಿಕಾರಿ ಜೆ.ಸಿ. ಸರಸ್ವತಿ, ಮೇಲ್ವಿಚಾರಕಿ ಜ್ಯೋತಿಗುಡಿ,ಹಣಕಾಸು ಪ್ರಬಂಧಕ ಸುರೇಶ್ ಸೇವಾಪ್ರತಿನಿಧಿ ಲಕ್ಷ್ಮೀದೇವಿ, ಉಮಾ, ಡಿ. ಎಚ್. ಪೂರ್ಣಿಮಾ,ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು, ತರಬೇತಿ ಪಡೆಯುವವರು,ಉಪಸ್ಥಿತರಿದ್ದರು.