ವಿಜಯನಗರ : ಶಿವಮೊಗ್ಗದ ನೆಹರು ಇಂಡೋರ್ ಸ್ಟೇಡಿಯಂನಲ್ಲಿ 18ರಿಂದ 20ರವರೆಗೆ ನಡೆದ 25ನೇ ರಾಜ್ಯಮಟ್ಟದ ಜೂನಿಯರ್ ವುಶು ಚಾಂಪಿಯನ್‌ಶಿಪ್‌ನಲ್ಲಿ ವಿಜಯನಗರ ಜಿಲ್ಲಾ ಕುಂಗ್-ಫು ವುಶು ಸಂಸ್ಥೆಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಚಾಂಪಿಯನ್‌ಶಿಪ್‌ನಲ್ಲಿ ವಿಜಯನಗರ ಜಿಲ್ಲೆಯಿಂದ ಭಾಗವಹಿಸಿದ್ದ ಐವರು ಕ್ರೀಡಾಪಟುಗಳು ಐದು ಪದಕಗಳನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎಸ್. ಅಕ್ಷಯ್ ಹಾಗೂ ರಿಯಾನ್ ತಲಾ ಚಿನ್ನದ ಪದಕ ಗೆದ್ದು, ಚೆನ್ನೈನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ವುಶು ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಒಟ್ಟಾರೆ ವಿಜಯನಗರ ಜಿಲ್ಲೆಗೆ 2 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಸೇರಿದಂತೆ 5 ಪದಕಗಳು ಲಭಿಸಿವೆ. ಕ್ರೀಡಾಪಟುಗಳ ಈ ಸಾಧನೆಗೆ ವಿಜಯನಗರ ಜಿಲ್ಲಾ ಕುಂಗ್-ಫು ವುಶು ಸಂಸ್ಥೆಯ ಪದಾಧಿಕಾರಿಗಳು, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.