ನಾಯಕನಹಟ್ಟಿ : 18 ವರ್ಷ ತುಂಬದ ಮಕ್ಕಳು ವಾಹನ ಓಡಿಸಿ ಅಪಘಾತ ನಡೆದರೆ ಇಲ್ಲಿ ಆ ಮಗುವಿನ ಮೇಲೆ ಮತ್ತು ತಂದೆಯ ಮೇಲೆ ವಾಹನದ ಮಾಲೀಕನ ಮೇಲೆ ಪ್ರಕರಣ ದಾಖಲಾಗುತ್ತದೆ ಆದ್ದರಿಂದ ಪೋಷಕರಾದವರು ಮಕ್ಕಳಿಗೆ ವಾಹನ ಓಡಿಸಲು ಅವಕಾಶ ನೀಡಬೇಡಿ ಎಂದು ನಾಯಕನಹಟ್ಟಿ ಪಿ.ಎಸ್.ಐ. ಪಾಂಡುರAಗಪ್ಪ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹೆಲ್ಮೇಟ್ ಧರಿಸದೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು. ನಂತರ ಮಾತನಾಡಿದ ಅವರು ಅವಸರವೇ ಅಪಾಯ, ನಿಧಾನವೇ ಪ್ರಧಾನ ಹೀಗಾಗಿ ರಸ್ತೆಯಲ್ಲಿ ಸಂಚರಿಸುವಾಗ ಸಾವಧಾನದಿಂದ ಸಂಚಾರಿ ನಿಯಮ ಪಾಲಿಸುತ್ತ ನಡೆದರೆ ಅಪಾಯದಿಂದ ದೂರ ಇರಬಹುದು. ಪ್ರಸ್ತುತ ನಡೆಯುತ್ತಿರುವ ರಸ್ತೆ ಅಪಘಾತಗಳಿಗೆ ರಸ್ತೆ ನಿಯಮಗಳ ಉಲ್ಲಂಘನೆಯೇ ಕಾರಣವಾಗಿದೆ. ಅದಕ್ಕಾಗಿ ಹೆಲ್ಮೆಟ್ ಧರಿಸಿ ಪ್ರಯಾಣಿಸಬೇಕು.
ಕುಟುಂಬದ ಮೇಲೆ ಪ್ರೀತಿ, ವಿಶ್ವಾಸವಿರುವ ಪ್ರತಿಯೊಬ್ಬರು ವಾಹನ ಸವಾರರು ಹೆಲ್ಮೇಟ್ ಧರಿಸಬೇಕು. ಚಾಲಕರ ಹಿತದೃಷ್ಠಿಗಾಗಿ ವಾಹನ ಕಾಯಿದೆ ನಿಯಮ ಉಲ್ಲಂಘನೆಗೆ ದಂಡ ಹೆಚ್ಚಳ ಮಾಡಲಾಗಿದೆ. ಅದನ್ನು ನಾಗರಿಕರು ಅರ್ಥ ಮಾಡಿಕೊಂಡು ಸಮರ್ಪಕ ದಾಖಲೆ ಇಟ್ಟುಕೊಳ್ಳಬೇಕು. ಹೆಲ್ಮೆಟ್ ಧರಿಸುವುದು ಚಾಲಕರ ಹಿತದೃಷ್ಟಿಯಿಂದ ಉತ್ತಮ. ಹೆಚ್ಚಿನ ಅಪಘಾತ ಸಂದರ್ಭದಲ್ಲಿಚಾಲಕರು ತಲೆಗೆ ಪೆಟ್ಟು ಬಿದ್ದು ಅಸುನಿಗಿದ್ದು ಹೆಚ್ಚು. ಅದಕ್ಕಾಗಿ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡಬೇಕು ಎಂದರು.
ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಅಪ್ರಾಪ್ತರು ಬೈಕ್, ಕಾರು ಚಾಲನೆ ಮಾಡುವುದು ಹೆಚ್ಚಾಗಿದ್ದು ಅದನ್ನು ತಡೆಗಟ್ಟಬೇಕು.ವಾಹನದ ಮಾಲೀಕ ವಾಹನದ ವಿಮೆ ಕಂತು ಸಮರ್ಪಕವಾಗಿ ಕಟ್ಟಬೇಕು. ಇಲ್ಲವಾದಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗುತ್ತದೆ. ಶಾಲೆ, ಆಸ್ಪತ್ರೆ, ಪಟ್ಟಣ ವಲಯದಲ್ಲಿ ವಾಹನ ಚಾಲಕರು ನಿಧಾನವಾಗಿ ಚಲಿಸುವ ಜತೆಗೆ ಕರ್ಕಶ ಧ್ವನಿಯ ಹಾರ್ನ್ ಮಾಡಬಾರದು. ಬಹುತೇಕ ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದವರು ತಲೆಗೆ ತಿವೃತರಹದ ಪೆಟ್ಟು ಬಿದ್ದು ಸಾವನ್ನಪ್ಪೊರಿತ್ತಾರೆ.
ಆಗಸ್ಟ್ 15ರವರೆಗೆ ಹೆಲ್ಮೆಟ್ ಖರಿದಿಸಿ ಅವಕಾಶ ನೀಡಲಾಗಿದೆ. ಆಗಸ್ಟ್ 15ರ ನಂತರ ಹೆಲ್ಮೆಟ್ ಇಲ್ಲದೆ ಸಂಚಿರಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲಾಗುತ್ತದೆ ಎಂದು ದ್ವಿಚಕ್ರ ವಾಹನ ಸವಾರರಿಗೆ ಕಡಕ್ಕಾಗಿ ಎಚ್ಚರಿಕೆ ನೀಡಿದರು. ನಿಮ್ಮ ಪ್ರಾಣಾಪಯಕ್ಕೊಸ್ಕರ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ತೆರಳಿ ಎಂದು ಕೈ ಮುಗಿದು ಮನವಿ ಮಾಡಿಕೊಂಡರು. ತಮ್ಮ ಜೀವ ಉಳಿಸಲು ಹೆಲ್ಮೆಟ್ ಹಾಕಿಕೊಳ್ಳಲಿ ಯಾಕೆಂದರೆ ಅವರಿಂದ ಹಿಡಿ ಕುಟುಂಬವೆ ಅವಲಂಬನೆಯಾಗಿರುತ್ತದೆ. ಹೆಲ್ಮೆಟ್ ಧರಿಸದ ಅದೇಷ್ಟೋ ಜನರು ಸಂಕಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಎಲ್ಲಾರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದರು.
ಪತ್ರಿಕೆಯೊಂದಿಗೆ ಮಾತನಾಡಿದ ಬೈಕ್ ಸವಾರ ಮಾತನಾಡಿ ನಾನು ಹೆಲ್ಮೆಟ್ ಹಾಕಿರಲಿಲ್ಲ ಆಗಾಗಿ ಪೊಲೀಸರು ನನಗೆ ತಡೆದರು. ಪೊಲೀಸರ ಕಾರ್ಯ ನಿಜಕ್ಕೂ ಒಳ್ಳೆಯದು ಹೆಲ್ಮೆಟ್ ಧರಿಸುವುದರಿಂದ ಅಪಘಾತ ಸಂದರ್ಭದಲ್ಲಿ ಜೀವ ಉಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಎಂದು ಕೇಳಿಕೊಂಡರು.