ನಾಯಕನಹಟ್ಟಿ : ಜನತಂತ್ರ ಉಳಿಸಿ ಆಂದೋಲನ ಕರ್ನಾಟಕದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸಿರುವ ಹಿರೇಹಳ್ಳಿ ಎಂ ಮಲ್ಲಿಕಾರ್ಜುನ ರವರು ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪನಹಳ್ಳಿ, ಗಜ್ಜುಗಾನಹಳ್ಳಿ, ಎನ್ ದೇವರಹಳ್ಳಿ,, ಏನ್ ಮಹದೇವಪುರ, ಚನ್ನಬಸವಯ್ಯನಹಟ್ಟಿ ಗೌಡಗೆರೆ ,ಜೋಗಿಹಟ್ಟಿ, ಮಲ್ಲೂರಹಟ್ಟಿ , ಭೀಮಗೊಂಡನಹಳ್ಳಿ ಇತ್ಯಾದಿ ಗ್ರಾಮಗಳ ಪ್ರೌಢಶಾಲೆ ಮತ್ತು ಪ್ರಾಥಮಿಕ ಪಾಠಶಾಲೆಗಳಿಗೆ ಭೇಟಿ ನೀಡಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಪದವೀಧರ ಶಿಕ್ಷಕರನ್ನು ಕುರಿತು ಮಾತನಾಡುತ್ತಾ ಇಂದು ಜನತಂತ್ರ ಹಣ ತಂತ್ರವಾಗಿ ಮಾರ್ಪಟ್ಟು ಜನತಂತ್ರಕ್ಕೆ ಬುನಾದಿಯಾದ ಮತ ಇಂದು ಮಾರಾಟದ ಸರಕು ಆಗಿದೆ . ಬಂಡವಾಳ ಶಾಯಿಗಳು ರಾಜಕೀಯ ಪಕ್ಷಗಳ ಮೂಲಕ ಮತದಾರರನ್ನು ಖರೀದಿ ಮಾಡಿ ತಮಗೆ ಅನುಕೂಲಕರ ನೀತಿ-ನಿಯಮಗಳನ್ನು ಸರ್ಕಾರದ ಮೂಲಕ ಜಾರಿಗೊಳಿಸಿ ಕೊಂಡು ತಮ್ಮ ಸಂಪತ್ತನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಮತ ಖರೀದಿದಾರರು ಮತ್ತು ಈ ಖರೀದಿಯಲ್ಲಿ ಭಾಗಿಯಾಗಿರುವ ದಳ್ಳಾಳಿಗಳ ಸಂಯೋಜನೆಯಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ನಿತ್ಯದ ಬದುಕನ್ನು ಸಾಗಿಸಲು ಪರದಾಡುತ್ತಿದ್ದಾರೆ. ಇದನ್ನು ಕೊನೆಗಾಣಿಸಿ ಮತಕ್ಕೆ ಮೌಲ್ಯ ತಂದು ಮತದಾರನಿಗೆ ಅಸ್ಥಿತ್ವ ತಂದುಕೊಡುವ ಉದ್ದೇಶದಿಂದ ಮತ ಮಾರಾಟದಿರುವ ತೀರ್ಮಾನವನ್ನು ಕೈಗೊಳ್ಳಲು ಮತ್ತು ಜನತಂತ್ರ ಉಳಿಸುವ ಆಂದೋಲನದಲ್ಲಿ ಭಾಗಿಯಾಗುವಂತೆ ಕೋರಿದರು.