ನಾಯಕನಹಟ್ಟಿ : ಶ್ರೀ ಗೌರಸಮುದ್ರ ಮಾರಮ್ಮ ದೇವಿಯ ಕೃಪೆಯಿಂದ 7 ಬಾರಿ ಶಾಸಕನಾಗಿದ್ದೇನೆ ಎಂದು ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ನಾಯಕನಹಟ್ಟಿ ಸಮೀಪದ ತಳಕು ಹೋಬಳಿಯ ವಿವಿಧ ಗ್ರಾಮಗಳ ರಸ್ತೆ ಹಾಗೂ ಮೂಲ ಸೌಕಾರ್ಯ ಅಭಿವೃದ್ಧಿಗೆ 8.75 ಕೋಟಿ ಅನುದಾನದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಮನೆಕೋಟೆ – ಬಂಜಿಗೆರೆ ರಸ್ತೆ ಅಭಿವೃದ್ಧಿ – 3.50 ಕೋಟಿ, ಗೌರಸಮುದ್ರ ತುಮಲ್ಲು ರಸ್ತೆ ಅಭಿವೃದ್ಧಿ – 1.50 ಕೋಟಿ, ಹಿರೇಹಳ್ಳಿ – ಗೌರಸಮುದ್ರ ರಸ್ತೆ ಅಭಿವೃದ್ಧಿ – 2.00 ಕೋಟಿ – ಚಿಕ್ಕಹಳ್ಳಿ ರಸ್ತೆ ಅಭಿವೃದ್ಧಿ – 1.50 ಕೋಟಿ, ಹಿರೇಹಳ್ಳಿ ಹಾಗೂ ಕಾಕಿಬೋರನಟ್ಟಿ ಗ್ರಾಮಗಳಲ್ಲಿ ಸಿಸಿ ರಸ್ತೆ ಅಭಿವೃದ್ಧಿ – 25 ಲಕ್ಷ ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಈ ಕ್ಷೇತ್ರದ ಜನ ಈ ಬಾರಿ ಮಂತ್ರಿ ಆಗುತ್ತಾರೆ ಎಂಬ ಇಡಿ ರಾಜ್ಯದ ಜನತೆ ನಿರೀಕ್ಷೆವಹಿಸಿಕೊಂಡಿದ್ದರು. ಅನಿವಾರ್ಯ ಪರಿಸ್ಥಿತಿಗಳಲ್ಲಿ ಅದು ನನಗೆ ಕೈಗೂಡಲಿಲ್ಲ ತಾಯಿಯ ರಕ್ಷಣೆ ಅಭಿಮಾನ ಮತ್ತು ಹೆಚ್ಚು ಶಕ್ತಿ ಕೊಟ್ಟರೆ ನಿಮ್ಮವರ ಮುಖಗಳನ್ನು ನೋಡಿಕೊಂಡು ಸಂತೋಷ ಪಡುತ್ತೇನೆ. ಹೆಚ್ಚಿನ ಕೆಲಸಗಳನ್ನು ಮಾಡುವುದೇ ನನ್ನ ಮೊದಲ ಆದ್ಯತೆ ಅಧಿಕಾರ ಬರಲಿ ಬಿಡಲಿ ನಿವೇಲ್ಲರೂ ಜೊತೆಗೆ ಕೈ ಜೋಡಿಸಿಕೊಂಡು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ನೀವು ನಮ್ಮನ್ನು ಕೈ ಬಿಡುವುದಿಲ್ಲ. ನಾನು ಸಹ ನಿಮ್ಮನ್ನು ಕೈ ಬಿಡುವುದಿಲ್ಲ. ಯಾವಾಗಲು ನೀವು ನಮಗೆ ಪ್ರೊತ್ಸಹಿಸಿದರೆ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುವುದಾಗಿ ತಿಳಿಸಿದರು. ಗೌರಸಮುದ್ರ ಜಾತ್ರೆ ಹತ್ತಿರ ಇರುವುದರಿಂದ ಕಾಂಟ್ರಾಕ್ಟರ್‌ಗಳು ಈಗಿನಿಂದಲೆ ಕೆಲಸ ಮಾಡಬೇಕು. ಜಾತ್ರೆಗೆ ಆಂಧ್ರ, ಬಳ್ಳಾರಿ ಹೊರ ರಾಜ್ಯಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ ಎಂದರು.
ಈ ಬಾರಿ ಗೌರಸಮುದ್ರ ಜಾತ್ರೆಯ ಪೂರ್ವಭಾವಿ ಸಭೆ ತಾಲ್ಲೂಕು ಪಟ್ಟದಲ್ಲಿ ಸಭೆ ನಡೆಸುತ್ತಿದ್ದೇವೆ. ಆದರೆ ಈ ಬಾರಿ ಗೌರಸಮುದ್ರ ಗ್ರಾಮದಲ್ಲಿ ಜಾತ್ರೆ ಪೂರ್ವ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಪಾಲನಾಯಕನಕೋಟೆ ನೊಂದ ಮಹಿಳೆ ಮಾತನಾಡಿ ದೇಶಕ್ಕೆ ಸ್ವಾತಂತ್ರö್ಯ ಬಂದು 80 ವರ್ಷ ಕಳೆದರು ನಮ್ಮ ಗ್ರಾಮಕ್ಕೆ ಬಸ್ ಸಂಪರ್ಕವಿಲ್ಲ, ನಮ್ಮ ಮಕ್ಕಳು ಹಿರೇಹಳ್ಳಿ ಗ್ರಾಮಕ್ಕೆ ಹೋಗುತ್ತಾರೆ. ಬಸ್ ಸಂಪರ್ಕವಿಲ್ಲದ ಕಾರಣ ಎಷ್ಟೋ ಮಕ್ಕಳು ಶಾಲೆಯನ್ನು ತೊರೆದಿದ್ದಾರೆ. ಆದ್ದರಿಂದ ಶೀಘ್ರದಲ್ಲೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಶಾಸಕ ಎನ್.ವೈ.ಗೋಪಾಲಕೃಷ್ಣರವರಿಗೆ ಅಳಲು ತೊಡಿಕೊಂಡರು.
ಇದಕ್ಕೆ ಸ್ಪಂದಿಸಿದ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಸ್ಥಳದಲ್ಲೆ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಮ್ಯಾನೇಜರ್‌ರವರಿಗೆ ಫೋನ್ ಮೂಲಕ ಸಂಪರ್ಕಿಸಿ ಬಸ್ ವ್ಯವಸ್ಥೆ ಕಲ್ಪಿಸಿವುದರ ಮೂಲಕ ಶಾಲಾ ಮಕ್ಕಳಿಗೆ ಓದುವುದಕ್ಕೆ ಯಾವಾಗಲು ನನ್ನ ಬೆಂಬಲವಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್‌ರೆಡ್ಡಿ, ಹಿರೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜಮ್ಮ, ಗೌರಸಮುದ್ರ ಮಾಜಿ ಅಧ್ಯಕ್ಷ ಓಬಣ್ಣ, ಹಿರೇಹಳ್ಳಿ ವಕೀಲ ಮಲ್ಲೇಶ್, ಬಿಜಿಕೆರೆ ನಾಗಭೂಷಣ, ಚಂದ್ರಣ್ಣ, ರಾಜ, ವಿಶ್ವನಾಥರೆಡ್ಡಿ, ಜವಳಿ ಮಂಜು, ಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ತಳಕು ಪೊಲೀಸ್ ಇಲಾಖೆ ಸಿಬ್ಬಂದಿಗಳು ಇನ್ನೂ ಇತರರು ಇದ್ದರು.