ಮೊಳಕಾಲ್ಮೂರು: ಚಿತ್ರದುರ್ಗ ಜಿಲ್ಲೆಯ ಗಡಿ ತಾಲೂಕು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ (ST ಮೀಸಲು) ದಲ್ಲಿ 2028 ರ ವಿಧಾನಸಭಾ ಚುನಾವಣೆಯ ಕಾವು ಈಗಿನಿಂದಲೇ ಆರಂಭವಾಗಿದೆ. ಕಾಂಗ್ರೆಸ್ ನ ಹಾಲಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಸತತವಾಗಿ ಗೆಲ್ಲುತ್ತಿದ್ದರೂ, ಬಿಜೆಪಿ ಪಾಳಯದಲ್ಲಿ ಈ ಬಾರಿ ಟಿಕೆಟ್ ಯಾರಿಗೆ ಸಿಗಬೇಕು ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಿವೃತ್ತ KAS ಅಧಿಕಾರಿ ಎನ್. ರಘುಮೂರ್ತಿ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಒಂದೇ ಎರಡು ಕುಟುಂಬಗಳ ನಡುವೆ ಅಧಿಕಾರದ ಪೈಪೋಟಿ ನಡೆಯುತ್ತಿದೆ. 2008 ರಿಂದ 2023 ರವರೆಗೆ ನಡೆದ ಐದು ಚುನಾವಣೆಗಳಲ್ಲಿ ಎನ್.ವೈ. ಗೋಪಾಲಕೃಷ್ಣ ಮತ್ತು ಎಸ್. ತಿಪ್ಪೇಸ್ವಾಮಿ ಅವರೇ ಪ್ರಮುಖ ಸ್ಪರ್ಧಿಗಳಾಗಿದ್ದರು. 2018 ರಲ್ಲಿ ಬಿ. ಶ್ರೀರಾಮುಲು ಅವರು ಗೆದ್ದಿದ್ದು ಬಿಟ್ಟರೆ, ಉಳಿದ ಮೂರು ಬಾರಿ ಕಾಂಗ್ರೆಸ್ ಗೆದ್ದಿದೆ. 2023 ರ ಚುನಾವಣೆಯಲ್ಲಿ ಬಿಜೆಪಿಯ ಎಸ್. ತಿಪ್ಪೇಸ್ವಾಮಿ ಅವರು 87,310 ಮತ ಪಡೆದು 22,149 ಮತಗಳ ಅಂತರದಿಂದ ಸೋತಿದ್ದರು. ಹೀಗಾಗಿ ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂಬ ಕೂಗು ಬಿಜೆಪಿ ಕಾರ್ಯಕರ್ತರಲ್ಲಿ ಕೇಳಿಬರುತ್ತಿದೆ. ಮಾಜಿ ಶಾಸಕರಾದ ನೇರಲಗುಂಟೆತಿಪ್ಪೇಸ್ವಾಮಿ ಹಾಗೂ ಪಟೇಲ್ ಜಿ ತಿಪ್ಪೇಸ್ವಾಮಿ ಅವರೊಂದಿಗೂ ಕೂಡ ಉತ್ತಮ ಬಾಂಧವ್ಯವನ್ನು ಇವರು ಹೊಂದಿದ್ದಾರೆ
ಈ ಹಿನ್ನೆಲೆಯಲ್ಲಿ ಎನ್. ರಘುಮೂರ್ತಿ ಅವರು ಸೂಕ್ತ ಅಭ್ಯರ್ಥಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮೂಲತಃ ಚಿತ್ರದುರ್ಗ ಜಿಲ್ಲೆಯವರೇ ಆದ ರಘುಮೂರ್ತಿ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ KAS ಅಧಿಕಾರಿಯಾಗಿ 30 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಸೇವಾವಧಿಯಲ್ಲಿ ಎಲ್ಲಿಯೂ ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ. ನಿವೃತ್ತಿಯ ನಂತರ ಅವರು ತವರಿಗೆ ಮರಳಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇತ್ತೀಚೆಗೆ ಕೊಡ್ಲಹಳ್ಳಿಯಲ್ಲಿ ನಡೆದ RSS ಶತಮಾನೋತ್ಸವದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಪ್ರಮುಖ ಅತಿಥಿಯಾಗಿ ಭಾಗವಹಿಸಿ ಹಿಂದೂ ಸಂಘಟನೆಯ ಮಹತ್ವದ ಬಗ್ಗೆ ಮಾತನಾಡಿದ್ದರು. ಇದರಿಂದಾಗಿ ಅವರಿಗೆ RSS, VHP, ಭಜರಂಗದಳ ಮತ್ತು ಬಿಜೆಪಿ ಮಂಡಲದೊಂದಿಗೆ ಉತ್ತಮ ಬಾಂಧವ್ಯವಿದೆ.
ಮೊಳಕಾಲ್ಮೂರು ಕ್ಷೇತ್ರದಲ್ಲಿ ಸುಮಾರು 2.30 ಲಕ್ಷ ಮತದಾರರಿದ್ದು, ಅದರಲ್ಲಿ ಪರಿಶಿಷ್ಟ ಜಾತಿ ST ಸಮುದಾಯದ ವಾಲ್ಮೀಕಿ, ಬೋಯ, ಕುರುಬ, ಲಿಂಗಾಯತ, ರೆಡ್ಡಿ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ವಿದ್ಯಾವಂತ, ಆಡಳಿತ ಅನುಭವ ಇರುವ ಅಭ್ಯರ್ಥಿ ಬಂದರೆ ಎಲ್ಲಾ ಸಮುದಾಯದ ಮತಗಳನ್ನು ಸೆಳೆಯಬಹುದು. ಅದರಲ್ಲೂ ಯುವಕರು ಮತ್ತು ಮಹಿಳಾ ಮತದಾರರಲ್ಲಿ ರಘುಮೂರ್ತಿ ಅವರಿಗೆ ಉತ್ತಮ ಬೆಂಬಲವಿದೆ. ಇವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಕೊಂಡಜ್ಜಿ ಗ್ರಾಮದವರಾಗಿತ್ತು ಸಂತ ಜಿಲ್ಲೆಯವ ಆಗುತ್ತಾರೆ
"ನಮಗೆ ಈ ಬಾರಿ ಬದಲಾವಣೆ ಬೇಕು. ಅಧಿಕಾರಿ ಆಗಿದ್ದವರು ಹಲವಾರು ಸರ್ಕಾರಿ ಶಾಲೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ತಹಸಿಲ್ದಾರ್ ಆಗಿದ್ದ ಸಮಯದಲ್ಲಿ ಸ್ಮಾರ್ಟ್ ಕ್ಲಾಸ್ ಗಳನ್ನಾಗಿ ಮಾಡಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬದಲಾವಣೆ ತಂದವರು ಸಾವಿರಾರು ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯನ್ನು ನೀಡಿ ನೆರವು ನೀಡಿದ್ದಾರೆ ಇಂಥವರು ಶಾಸಕರಾದರೆ ನಮ್ಮ ತಾಲೂಕಿನ ಕುಡಿಯುವ ನೀರು, ರಸ್ತೆ, ಶಿಕ್ಷಣ ಸಮಸ್ಯೆ ಬಗೆಹರಿಯುತ್ತದೆ. ಹೈಕಮಾಂಡ್ ರಘುಮೂರ್ತಿ ಅವರಿಗೆ ಟಿಕೆಟ್ ಕೊಟ್ಟರೆ ನಾವು ಗೆಲುವಿಗೆ ಶ್ರಮಿಸುತ್ತೇವೆ" ಎಂದು ಮೊಳಕಾಲ್ಮೂರಿನ ಬಿಜೆಪಿ ಯುವ ಕಾರ್ಯಕರ್ತರು ಹೇಳಿದ್ದಾರೆ.
ಒಟ್ಟಾರೆ, ಮೊಳಕಾಲ್ಮೂರಿನಲ್ಲಿ ಬಿಜೆಪಿಗೆ ಗೆಲುವು ಬೇಕಾದರೆ ಹೊಸ ಮುಖ, ಕ್ಲೀನ್ ಇಮೇಜ್ ಇರುವ ಎನ್. ರಘುಮೂರ್ತಿ ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.