LIVE TV StateNationalPoliticsCrimeEntertainmentSportsEducationFINANCE & TAXATION
National News | Sports News

ಏಷ್ಯನ್‌ ಗೇಮ್ಸ್‌ ಪದಕ ವಿಜೇತ ಕೆಐಐಟಿ, ಕಿಸ್‌ ಸಾಧಕರಿಗೆ ಸನ್ಮಾನ

ಒಟ್ಟು ರೂ.2.5 ಕೋಟಿ ಮೊತ್ತದ ಬಹುಮಾನ ವಿತರಣೆ, ಸಾಧಕರಿಗೆ ಸಂಸ್ಥಾಪಕ ಅಚ್ಯುತ ಸಮಂತ ಅಭಿನಂದನೆ 

ಭುವನೇಶ್ವರ: ಜಪಾನ್‌ನ ಐಚಿ- ನಗೋಯಾದಲ್ಲಿ ನಡೆದ 20 ನೇ ಏಷ್ಯನ್‌ ಗೇಮ್ಸ್‌ ನ ವಿವಿಧ ಕ್ರೀಡೆಗಳಲ್ಲಿ ಪದಕ ಪಡೆದ ಇಲ್ಲಿನ ಕಳಿಂಗ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಸ್ಟ್ರಿಯಲ್‌ ಟೆಕ್ನಾಲಜಿ (ಕೆಐಐಟಿ) ಮತ್ತು ಕಳಿಂಗ ಇನ್ಸ್‌ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸಸ್‌ (ಕಿಸ್‌) ನ ಕ್ರೀಡಾಪಟುಗಳನ್ನು ಸಂಸ್ಥೆಯ ಆವರಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 

 news_1792861198_2_541.webp

 

ಸಂಸ್ಥೆಯ ಕ್ರೀಡಾಪಟುಗಳು ಒಟ್ಟು 21 ಪದಕಗಳನ್ನು ಪಡೆದಿದ್ದು, ಇದರಲ್ಲಿ 3 ಚಿನ್ನ, 7 ಬೆಳ್ಳಿ ಮತ್ತು 11 ಕಂಚಿನ ಪದಕಗಳು ಸೇರಿವೆ. ಒಟ್ಟು 57 ಕ್ರೀಡಾಪಟುಗಳು ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 5 ಪದಕಗಳನ್ನು ಗೆದ್ದ ಕ್ರೀಡಾಪಟುಗಳನ್ನೂ ಸಮಾರಂಭದಲ್ಲಿ ಗೌರವಿಸಲಾಯಿತು. ಒಟ್ಟು 14 ಕೆಐಐಟಿ ವಿದ್ಯಾರ್ಥಿಗಳು ಗ್ಲಾಸ್ಗೋದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.news_1792861199_4_410.webp

 

 

ಒಂದು ಕೋಟಿ ಬಹುಮಾನ ಘೋಷಣೆ

ಏಷ್ಯನ್‌ ಗೇಮ್ಸ್‌ ಪದಕ ವಿಜೇತರ ಅಭಿನಂದನಾ ಸಮಾರಂಭದಲ್ಲಿ ಪ್ರೊ.ಅಚ್ಯುತ ಸಮಂತ ಅವರು, ಒಂದು ಮಹತ್ವದ ಘೋಷಣೆಯನ್ನೂ ಮಾಡಿದರು. 2028 ರಲ್ಲಿ ಲಾಸ್‌

news_1792861199_5_893.webp

 

ಕ್ರೀಡಾ ಸಾಧನೆ ಮಾಡುವವರಿಗೆ ಸ್ಫೂರ್ತಿ

ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಒಂದೇ ವಿಶ್ವವಿದ್ಯಾಲಯ ಇಂತಹ ಅಸಾಧಾರಣ ಸಾಧನೆ ಮಾಡಿರುವುದು ವಿಶೇಷವಾಗಿದೆ. ದೇಶದ ಕ್ರೀಡಾ ಕ್ಷೇತ್ರಕ್ಕೆ ಕೆಐಐಟಿ ಹಾಗೂ ಕಿಸ್‌ ನೀಡುತ್ತಿರುವ ಕೊಡುಗೆಯನ್ನು ಪ್ರಶಂಸಿಸಲಾಗುತ್ತಿದೆ. ವಿಶ್ವಮಟ್ಟದ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವ ಸಂಸ್ಥೆಯ ಬದ್ಧತೆ ಎಂತಹುದು ಇದರಿಂದ ತಿಳಿಯಲಿದೆ. ಪದಕ ಗೆದ್ದ  ಚಾಂಪಿಯನ್‌ಗಳು ದೇಶಕ್ಕೆ ಕೀರ್ತಿ ತಂದಿರುವುದಲ್ಲದೆ, ಕ್ರೀಡೆಯಲ್ಲಿ ಸಾಧನೆ ಮಾಡುವ ದೊಡ್ಡ ಕನಸು ಕಾಣಲು ಸ್ಫೂರ್ತಿಯನ್ನೂ ನೀಡಿದ್ದಾರೆ.

news_1792861198_0_494.webp

 

ಸಾಧನೆಯ ಛಲ ಹುಟ್ಟಿಸುವ ವಾತಾವರಣ

ಸಮಂತ ಅವರು ಸಮಾನವಾದ ದೃಢ ನಂಬಿಕೆಯಿಂದ ತರಗತಿ ಕೊಠಡಿ ಮತ್ತು ಆಟದ ಮೈದಾನಗಳನ್ನು ನಿರ್ಮಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿ ಇವೆರಡರ ನಡುವೆ ಯಾವುದಾದರೊಂದನ್ನು ಆರಿಸಿಕೊಳ್ಳಲೇಬೇಕೆಂಬ ಒತ್ತಾಯವನ್ನೂ ಅವರು ಮಾಡುವುದಿಲ್ಲ. ಇಲ್ಲಿನ ವಾತಾವರಣವೇ ಕ್ರೀಡಾಪಟುಗಳಲ್ಲಿ ಸಾಧಿಸಬೇಕೆಂಬ ಛಲವನ್ನು ಹುಟ್ಟಿಸುತ್ತದೆ. ಆಗ ಅದಕ್ಕೆ ಸರಿಯಾದ ಪ್ರೋತ್ಸಾಹ ಸಿಕ್ಕರೆ ಅವರ ಪದಕದ ಹಾದಿಯೂ ಸುಗಮವಾಗುತ್ತದೆ. ಅದಕ್ಕೆಂದೇ ಕ್ರೀಡಾಪಟುಗಳಿಗೆ ಉಚಿತ ತರಬೇತಿ, ಮುಕ್ತ ಆಯ್ಕೆ ಪ್ರಕ್ರಿಯೆ ಮತ್ತು ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಿದ್ದಾರೆ.

news_1792861198_1_286.webp

 

ಅಚ್ಯುತ ಸಮಂತ ಅವರ ದೂರದೃಷ್ಟಿ

ಸಂಸ್ಥೆಯ ಕ್ರೀಡಾಪಟುಗಳ ಈ ಸಾಧನೆಯ ಹಿಂದೆ ಸಂಸ್ಥಾಪಕರಾದ ಅಚ್ಯುತ ಸಮಂತ ಅವರ ದೂರದೃಷ್ಟಿ ಹಾಗೂ ಬದ್ಧತೆಯೂ ಮಹತ್ವದಾಗಿದೆ. ಅವರ ದೃಢವಾದ ಪ್ರೋತ್ಸಾಹ ಮತ್ತು ಸಮರ್ಪಣಾ ಭಾವವು ಶಿಕ್ಷಣದಂತೆ ಕ್ರೀಡೆಯಲ್ಲೂ ಮೇಲ್ಪಂಕ್ತಿ ಪಡೆಯಲು ಕಾರಣವಾಗಿದೆ. ಎರಡೂ ಸಂಸ್ಥೆಗಳಲ್ಲಿ ಕೇವಲ ಶಿಕ್ಷಣವಷ್ಟೇ ಅಲ್ಲ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸುವ, ಪೋಷಿಸುವ ಕನಸುಗಳಿಗೆ ಬಲ ನೀಡಲಾಗುತ್ತದೆ. ಭವಿಷ್ಯದ ಚಾಂಪಿಯನ್‌ಗಳು ಇಲ್ಲಿ ರೂಪುಗೊಳ್ಳುತ್ತಾರೆ. ಕ್ರೀಡಾಂಗಣದಲ್ಲಿ ಅವರು ಬೆವರು ಹರಿಸುತ್ತಾರೆ ಕೊನೆಗೆ ಪದಕಗಳನ್ನು ಕೊರಳಿಗೇರಿಸಿಕೊಳ್ಳುತ್ತಾರೆ.

ಸಮಾರಂಭದಲ್ಲಿ ಮಾತನಾಡಿದ ಅಚ್ಯುತ ಸಮಂತ ಅವರು, ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಸಚಿವರು ಸಾಕಷ್ಟು ಬೆಂಬಲ ನೀಡಿದ್ದಾರೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಇಷ್ಟೊಂದು ಪದಕ ಪಡೆದಿರುವುದು ಹೆಮ್ಮೆ ತಂದಿದೆ. ಒಡಿಶಾ ಸರ್ಕಾರವೂ ನಮಗೆ ಪ್ರೋತ್ಸಾಹ ನೀಡಿದೆ. ಕ್ರೀಡಾಪಟುಗಳ ಉತ್ಸಾಹ ಕಂಡು ಖುಷಿಯಾಗಿದೆ ಎಂದು ಹೇಳಿದರು.

 ಕ್ರೀಡಾಪಟುಗಳ ಅಭಿನಂದನಾ ಸಮಾರಂಭದಲ್ಲಿ ಕೆಐಐಟಿ ಉಪ ಕುಲಪತಿ ಪ್ರೊ. ಶರಣಜಿತ್ ಸಿಂಗ್, ರಿಜಿಸ್ಟ್ರಾರ್‌ ಜೆ. ರಂಜನ್ ಮೊಹಂತಿ,  ಕ್ರೀಡೆ ಮತ್ತು ಯೋಗ ವಿಜ್ಞಾನಗಳ ಶಾಲೆ ಮಹಾನಿರ್ದೇಶಕ ಗಗನೆಂದು ಡ್ಯಾಶ್‌, ಕೆಐಐಟಿಯ ಹಳೆ ವಿದ್ಯಾರ್ಥಿನಿ ಹಾಗೂ ಖ್ಯಾತ ಅಥ್ಲೀಟ್ ದ್ಯುತಿ ಚಾಂದ್, ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಾಧನೆ ಸಂಭ್ರಮಿಸೋಣ

ನಮ್ಮ ವಿದ್ಯಾರ್ಥಿಗಳನ್ನು ಜೀವನದ ಪ್ರತಿಯೊಂದು ಹಂತದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಮತ್ತು ರಾಷ್ಟ್ರಕ್ಕೆ ಹೆಮ್ಮೆ ತರಲು ನಾವು ಪ್ರೇರಿಪಿಸುತ್ತೇವೆ. 71 ಕ್ರೀಡಾಪಟುಗಳು ಮತ್ತು ಅವರು ಗೆದ್ದ 26 ಪದಕಗಳು ಈ ಮನೋಭಾವಕ್ಕೆ ಸಾಕ್ಷಿಯಾಗಿ ನಿಂತಿವೆ. ನಾವೆಲ್ಲರೂ ಒಟ್ಟಾಗಿ ಅವಕಾಶಗಳನ್ನು ಸೃಷ್ಟಿಸೋಣ, ಸಾಧನೆಗಳನ್ನು ಸಂಭ್ರಮಿಸೋಣ ಹಾಗೂ ಮಿತಿಗಳಿಲ್ಲದ ಕನಸು ಕಾಣಲು ಮುಂದಿನ ಪೀಳಿಗೆಗೆ ಸ್ಫೂರ್ತಿಯನ್ನು ನೀಡೋಣ

 

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಏಷ್ಯನ್‌ ಗೇಮ್ಸ್‌ ಪದಕ ವಿಜೇತ ಕೆಐಐಟಿ, ಕಿಸ್‌ ಸಾಧಕರಿಗೆ ಸನ್ಮಾನಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ.  ಮೊಳಕಾಲ್ಮೂರಿಗೆ ಹೊಸ ನಾಯಕತ್ವದ ಅಗತ್ಯ ಕೊಪ್ಪಳ ; ಎಸ್.ಐ.ಆರ್ ರದ್ದುಪಡಿಸಲು ಆಗ್ರಹಿಸಿ ಬೃಹತ್ ಪ್ರತಿರೋಧ ‘ತಿರಂಗಾ ಯಾತ್ರೆ’ಡಂಬಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ನವರ ಜಯಂತಿ ಆಚರಣೆನಾಳೆ ನಡೆಯುವ ಪ್ರತಿಭಟನೆಗೆ ಪಕ್ಷಾತೀತವಾಗಿ ಬಾಗವಹಿಸಿ : ಮಲ್ಲು ಚಾನಕೋಟಿರಕ್ತದಾನ ಮತ್ತು ರಕ್ತದ ಗುಂಪು ತಪಾಸಣೆಯ ಮಹತ್ವಪದವೀಧರರು ಪ್ರಜಾಪ್ರಭುತ್ವದ ಬಲವರ್ಧನೆಗೆ ಕೈಜೋಡಿಸಬೇಕು: ಆನಂದ್ ಎನ್.ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಣಿ ಬೆಳವಡಿ ಮಲ್ಲಮ್ಮ ಸ್ಮರಣಾರ್ಥ ಭಾರತಿದರ್ಶ ಫೌಂಡೇಶನ್ನಿಂದ 100 ಉಚಿತ ಕುಡಿಯುವ ನೀರಿನ ಸೇವೆಪ್ರಣಿತಾ ಪಿ. ರಂಗಪ್ರವೇಶ — ನೃತ್ಯ ವೈಭವದ ಅನನ್ಯ ಅನಾವರಣ