ನಾಯಕನಹಟ್ಟಿ : ಬೊಸೆದೇವರಹಟ್ಟಿ ಸಮೀಪದ ಶಿಡ್ಲಹಳ್ಳಕ್ಕೆ ಬೇಟಿ ನೀಡಿದ ಜೆಡಿಎಸ್ ಪರಾಜಿತ ಅಭ್ಯರ್ಥಿ ವೀರಭದ್ರಪ್ಪ ಕಳಪೆ ಕಾಮಗಾರಿ ವಿಕ್ಷಿಸಿದರು. ಎರಡು ಇಂಚು ದಪ್ಪನೂ ಇಲ್ಲ ಏನು ಓದಿ ಇಂಜಿನಿಯರ್ ಆಗಿದ್ದನು ಏನ್ ಲಂಚ ಕೊಟ್ಟು ಆಗಿದ್ದನು ಕಮಿಷನ್ ಎಷ್ಟು ಕೊಟ್ಟಿದ್ದೀರಿ ಮೂರು ತಿಂಗಳ ಇರಬೇಕಾದ ಕಾಮಗಾರಿ ಒಂದೇ ತಿಂಗಳಲ್ಲಿ ಹಾಳಾಗಿದೆ ಇದು ಬಡ ಕ್ಷೇತ್ರ ಮಳೆ ಬಂದ್ರೆ ಮಾತ್ರ ಬೆಳೆ ಅಲ್ಲಿ ಮಣ್ಣು ತೆಗೆದಿದ್ದಾರೆ ಇಲ್ಲಿ ಚೌಡಿ ಇರುತ್ತದೆ ಅಲ್ಲ ರೈತರು ಅಂದರೆ ಅಮಾಯಕರು ಅವರು ಏನು ಮಾಡಬೇಕು ಕಾಂಕ್ರೀಟ್ 2 ಇಂಚು ಇಲ್ಲ ಪುಡಿ ಪುಡಿ ಆಗುತ್ತೆ ಇಂಜಿನಿಯರ್ ಲಂಚ ಕೊಟ್ಟು ಕೆಲಸಕ್ಕೆ ಬಂದಿದ್ದಾನೆ ಕಮಿಷನ್ ಹೊಡೆದಿದ್ದಾನೆ ರೈತರು ಅಮಾಯಕರು ಅವರನ್ನು ವಂಚಿಸಿದ್ದಾರೆ ಎಂದು ಹೇಳಿದರು.
ಅದೇನು ಧ್ವಂಸ ಮಾಡಿದ್ದಾರಾ... ಎರಡು ಇಂಚು ಹೆಂಗಿರುತ್ತೆ ಅದು? ದೊಡ್ಡ ಕೆರೆ ನೀರಿಗೆ ಹೆಂಗಿರುತ್ತೆ? ನೋಡ್ರಿ ಒಂದು ನಿಮಿಷ..." ಆ ಇಂಜಿನಿಯರ್ ಏನು ಓದಿ ಇಂಜಿನಿಯರ್ ಆಗಿದ್ದನೋ, ಏನು ಲಂಚ ಕೊಟ್ಟು ಇಂಜಿನಿಯರ್ ಆಗಿದ್ದನೋ ನನಗೆ ಗೊತ್ತಿಲ್ಲ. ಇದನ್ನ ಮಾಡಿದ್ದಾನಲ್ಲ, ಕಮಿಷನ್ ಎಷ್ಟು ಕೊಟ್ಟಿದ್ದೀರಿ ಇಂಜಿನಿಯರ್ ಗೆ?" ಮೂರು ತಿಂಗಳು, ನಾಲ್ಕು ತಿಂಗಳಿಗೆ ಇಂತದ್ದು ನಾವು ಕಾಮಗಾರಿ ಮಸ್ತಾಗಿ ನೋಡಿದೀವಿ. ಒಂದೇ ತಿಂಗಳಿಗೆ ಈ ತರ ಆಗಿದೆ. ಸರ್ಕಾರದ್ದು ಅಂದ್ರೆ ಕೇಳೋರು ಮಾಡೋರು ಇಲ್ಲ ಅಂತ ಮಾಡಬೇಡಿ." "ದಯವಿಟ್ಟು ನಮ್ಮ ಕ್ಷೇತ್ರ ಬಡ ಕ್ಷೇತ್ರ, ದಯವಿಟ್ಟು ಜನಕ್ಕೆ ಅನುಕೂಲ ಆಗೋ ಹಂಗೆ ಮಾಡ್ರಿ. ನಮ್ಮ ಕ್ಷೇತ್ರಕ್ಕೆ ಮಳೆ ಬೆಳೆ ಬಂದ್ರೆನೇ ಬರೋದು, ಮಳೆ ಬೆಳೆ ಇಲ್ಲ ಅಂದ್ರೆ ಹೊಡೆದು ಹೋಗಿದೆ, ಮಳೆನೇ ಇಲ್ಲ ಈ ಕ್ಷೇತ್ರದಲ್ಲಿ."
ಕೇವಲ 2 ಇಂಚು ದಪ್ಪದ ಕಾಂಕ್ರೀಟ್ ಹಾಕಿದ್ದಾರೆ, ಇಂಜಿನಿಯರ್ ಓದಿ ಪಾಸ್ ಆಗಿದ್ದಾನೋ ಅಥವಾ ಲಂಚ ಕೊಟ್ಟು ಕೆಲಸಕ್ಕೆ ಬಂದಿದ್ದಾನೋ ಎಂದು ನೇರವಾಗಿ ಪ್ರಶ್ನಿಸಿದ್ದಾರೆ. 3-4 ತಿಂಗಳು ಇರಬೇಕಾದ ಕಾಮಗಾರಿ 1 ತಿಂಗಳಲ್ಲೇ ಹಾಳಾಗಿದೆ. ಇದು ಬರ ಪೀಡಿತ, ಬಡ ಕ್ಷೇತ್ರ, ರೈತರಿಗೆ ಮಳೆ ನೀರೇ ಆಧಾರ, ಇಂತಹ ಕಡೆ ಕಳಪೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ನೊಂದ ದಲಿತ ಮಹಿಳೆ ಮಾತನಾಡಿ ನಾಯಕನಹಟ್ಟಿ ಸಮೀಪದ ಶಿಡ್ಲಹಳ್ಳ ಎರಡು ಕೋಟಿ ಕಾಮಗಾರಿ ಕಳಪೆ ಐದು ಎಕರೆ ದಲಿತರ ಜಮೀನಿಗೆ ಪರಿಹಾರವಿಲ್ಲದ ಪರದಾಟ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ಎರಡು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಮ್ ಸೇತುವೆ ಕಾಮಗಾರಿ ಕಳಪೆಯಾಗಿದೆ ಜೊತೆಗೆ ಕಾಮಗಾರಿಗಾಗಿ ತೆಗೆದುಕೊಂಡ ದಲಿತರ ಐದು ಎಕರೆ ಜಮೀನಿಗೆ ಇಲ್ಲಿಯವರೆಗೆ ಒಂದು ರೂಪಾಯಿ ಪರಿಹಾರ ನೀಡಿಲ್ಲ ಎಂದು ಸಂತ್ರಸ್ತೆ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಅದನ್ನೆಲ್ಲ ಹಳ್ಳದ ಕಾಮಗಾರಿಯ ತೆಗೆದುಕೊಂಡಿದ್ದಾರೆ. ಇಂಜಿನಿಯರ್ ಮತ್ತು ಶಾಸಕ ಗೋಪಾಲಕೃಷ್ಣ ಅವರು ಕೇಳಿದರೆ ಗಲಾಟೆ ಮಾಡಬೇಡಿ ನಿಮಗೆ ಪರಿಹಾರ ಕೊಡುತ್ತಿರುತ್ತೇವೆ ಅಂತ ಹೇಳಿ ಕೆಲಸ ಮಾಡಿಸಿಕೊಂಡಿದ್ದಾರೆ ಈಗ ಕೇಳಿದರೆ ತಪ್ಪಿಸಿಕೊಂಡು ಹೋಗುತ್ತಾರೆ ನಮಗೆ ಬೇರೆ ಜಮೀನೇ ಇಲ್ಲ ಬದುಕೋದು ಹೇಗೆ ಸಂತ್ರಸ್ತೆ ಅಳಲು ತೊಡಿಕೊಂಡರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷ ಡಿ.ಬಿ.ಕರಿಬಸಪ್ಪ ಚೌಳಕೆರೆ, ಬೋರಣ್ಣ, ಪೂಜಾರಿ ತಿಪ್ಪೇಸ್ವಾಮಿ, ಚಂದ್ರಪ್ಪ, ತಿಪ್ಪೇಶಿ, ತಾರಕೇಶ್ ಹಾಗೂ ಇನ್ನೂ ಇತರರು ಇದ್ದರು.