LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Chitradurga

ಎಸ್ ಸಿ ಎಸ್ ಟಿ ಬುಡಕಟ್ಟು ಸಮುದಾಯದವರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ

ನಾಯಕನಹಟ್ಟಿ :  ಈ ದೇಶದಲ್ಲಿ ರಾಷ್ಟ್ರಪತಿ ಮತ್ತು  ಪ್ರಧಾನ ಮಂತ್ರಿ ಯಿಂದ ಸಾಮಾನ್ಯ ವ್ಯಕ್ತಿವರೆಗೂ ಸಮಾನವಾದ ಹಕ್ಕು ಸ್ವಾತಂತ್ರ್ಯವನ್ನು ನೀಡಿದ ಸಂವಿಧಾನದ ಅಡಿಯಲ್ಲಿ ಸಮಾನ ಮತದಾನದ ಹಕ್ಕನ್ನು ಸಹ ನೀಡಿದೆ ಆದರೆ ಈ ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಬಡವರು ಬಡವರಾಗಿಯೇ ಇದ್ದಾರೆ ಅರೆ ಅಲೆಮಾರಿ ಅಲೆಮಾರಿ ಎಸ್ ಸಿ ಎಸ್ ಟಿ ಬುಡಕಟ್ಟು ಸಮುದಾಯದವರು ಎಂದಿಗೂ ನಾಗರಿಕ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ರು ಹಾಗೂ ದೌರ್ಜನ್ಯ ತಡೆ ಕಾಯ್ದೆ ನಾಮನಿರ್ದೇಶನ ಸದಸ್ಯರಾದ ನರೇನಹಳ್ಳಿ ಅರುಣ್ ಕುಮಾರ್ ರವರು ಬೇಸರ ವ್ಯಕ್ತಪಡಿಸಿದರು

 

 ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂಭಾಗದಲ್ಲಿ ಸುಡುಗಾಡು ಸಿದ್ದ ಜನಾಂಗದವರಿಗೆ ನಾಗರೀಕ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ಪ್ರತಿಭಟಸಿ ಆಗ್ರಹಿಸಿದರು

 

 ಪಟ್ಟಣ ಪಂಚಾಯಿತಿ   ವ್ಯಾಪ್ತಿಯಲ್ಲಿ ಕಳೆದ 30 ರಿಂದ 40 ವರ್ಷಗಳವರೆಗೂ 50ಕ್ಕೂ ಹೆಚ್ಚು ಕುಟುಂಬದ ಅಲೆಮಾರಿ ಅರೆ ಅಲೆಮಾರಿ ಎಸ್ ಸಿ ಎಸ್ ಟಿ ಬುಡಕಟ್ಟು ಸಮುದಾಯದ ಸುಡುಗಾಡು ಸಿದ್ದ ಜನಾಂಗದವರು ಬಟ್ಟೆ ಟೆಂಟ್ ಗಳಲ್ಲಿ ಮನೆಯಂತೆ ನಿರ್ಮಿಸಿಕೊಂಡು ಕೂಲಿ ನಾಲೆ ಮಾಡಿ ಸಣ್ಣ ಪುಟ್ಟ ವ್ಯಾಪಾರ ಮಾಡಿ ಮತ್ತು ಭಿಕ್ಷೆ ಬೇಡಿ ಜೀವಿಸುತ್ತಿರುವ ಹುಡುಗಾಡು ಸಿದ್ದ ಸಮುದಾಯದವರು  ನಾಗರೀಕ ಮೂಲಭೂತ ಸೌಲಭ್ಯಗಳಾದ ನಿವೇಶನ, ವಸತಿ, ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಹಲವು ಸೌಲಭ್ಯಗಳಿಂದ ಬೀದಿಯಲ್ಲಿಯೇ ಬದುಕು ನಡೆಸುವಂತಹ ಪರಿಸ್ಥಿತಿಯಲ್ಲಿದ್ದು ಈ ಸಮುದಾಯಕ್ಕೆ ಶಾಶ್ವತವಾದ ನೆಲೆ ಕಲ್ಪಿಸುವಂತೆ ಹಾಗೂ ಅಲೆಮಾರಿಗಳ ಪ್ರತ್ಯೇಕ ಕಾಲೋನಿ ನಿರ್ಮಾಣಕ್ಕೆ ಎರಡು ಎಕರೆ ಜಾಗ ಮಂಜೂರಾತಿ ನೀಡಬೇಕು ಮತ್ತು ಅಲೆಮಾರಿಗಳು ವಾಸಿಸುತ್ತಿರುವ ಪ್ರದೇಶಗಳಲ್ಲಿ ಕುಡಿಯುವ ನೀರು ರಸ್ತೆ ಚರಂಡಿ ಮತ್ತು ವಿದ್ಯುತ್ ದೀಪ ತುರ್ತಾಗಿ ಆಗಬೇಕು ಎಂದು ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷರು ಹಾಗೂ ದೌರ್ಜನ್ಯ ತಡೆ ಕಾಯ್ದೆ  ನಾಮನಿರ್ದೇಶನ ಸದಸ್ಯರು ಆದಾ ನರೇನಹಳ್ಳಿ ಅರುಣ್ ಕುಮಾರ್ ರವರು  ಆಡಳಿತವನ್ನು ಆಗ್ರಹಿಸಿದರು.

 

 ಹಂದಿ ನಾಯಿಗಳಿಗೂ ಸಹ ವ್ಯವಸ್ಥಿತವಾದ ಮನೆಯನ್ನು ನಿರ್ಮಿಸುತ್ತಿರುವ  ಸರ್ಕಾರ ಅಲೆಮಾರಿ ಹರೆ ಅಲೆಮಾರಿ ಬುಡಕಟ್ಟು ಸಮುದಾಯದ ಹಾಗೂ ಸುಡುಗಾಡು ಸಿದ್ದರಿಗೆ ಇನ್ನು ಉಳಿದ ಸಮುದಾಯದವರಿಗೆ ಸೂಕ್ತವಾದ ಸೂರಿಲ್ಲದೆ ಹಂದಿ ನಾಯಿಗಳಿಗಿಂತಲೂ ಹೀನವಾಗಿ ಬದುಕುವಂಥ ಪರಿಸ್ಥಿತಿಯನ್ನು ನಿರ್ಮಾಣವಾಗಿದೆ ಬಟ್ಟೆ ಟೆಂಟುಗಳಲ್ಲಿ ಬೆಳೆಯುತ್ತಿರುವ ಸಣ್ಣ ಮಕ್ಕಳ ಭವಿಷ್ಯ ಉಜ್ವಲವಾಗಬೇಕೆಂದರೆ ಕೂಡಲೇ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸುಡುಗಾಡು ಸಿದ್ದರಿಗೆ ಹಾಗೂ ಸೋದರ ಸಮುದಾಯದವರಿಗೆ ಮೂಲಭೂತ ಸೌಕರ್ಯಗಳನ ಒದಗಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ , ರಾಜ್ಯದ್ಯಂತ ಸರ್ಕಾರದ ವಿರುದ್ಧ  ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಅಲೆಮಾರಿ ಅರೆ ಅಲೆಮಾರಿ ಎಸ್ ಸಿ ಎಸ್ ಟಿ ಬುಡಕಟ್ಟು ಮಹಾಸಭಾ ದ  ಜಿಲ್ಲಾ ಅಧ್ಯಕ್ಷರಾದ ಕೆ ಎಂ ನಾಗರಾಜ್ ರವರು ಸರ್ಕಾರಕ್ಕೆ ಆಗ್ರಹಿಸಿದರು.

ಮನವಿ ಪತ್ರವನ್ನು  ಪಟ್ಟಣ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕರಾದ ಸುರೇಶ್ ರವರು ಸ್ವೀಕರಿಸಿದರು

 

 ಈ ಪ್ರತಿಭಟನೆಯಲ್ಲಿ ಸುಡುಗಾಡು ಸಿದ್ದರ ಮುಖಂಡರಾದ ಸತ್ಯಪ್ಪ  ರಂಗಣ್ಣ  ಗುರುಸ್ವಾಮಿ  ಅಜಯ್  ಚೌಡಪ್ಪ  ಗಂಗಪ್ಪ  ಮಾರಣ್ಣ  ಚಿಕ್ಕ ಪುಟ್ಟ ಮಕ್ಕಳು ಮತ್ತು ಮಹಿಳೆಯರು ಹಾಗೂ ಸಮುದಾಯದ ಕುರುಗೋಡು ಗ್ರಾಮದ ಮುಖಂಡರು  ಭಾಗವಹಿಸಿದ್ದರು .

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಜೆಪಿ ಬೃಹತ್ ಸಾರ್ವಜನಿಕ ಸಮಾವೇಶಕ್ಕೆ ಅನುಮತಿ : ಭರದ ಸಿದ್ದತೆವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿಸತತ ಪುನರ್ವಸತಿ ಮತ್ತು ಫಿಸಿಯೋಥೆರಪಿಯ ಮೂಲಕ ರೋಗಿ ಸಂಪೂರ್ಣ ಗುಣಮುಖಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ. ಕಾಡಿನ ಜ್ಞಾನ ನಾಡಿಗೆ ಹಂಚಿದ ಕಾಡಿನ ಸಂತ ತೇಜಸ್ವಿ: ಗೊರೂರು ಶಿವೇಶ್ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ -2026 ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ; ಜನರ ಬದುಕಿನ ಪ್ರಶ್ನೆಗಳಿಗಾಗಿ ನಡೆಯುತ್ತಿರುವ ಜನಾಂದೋಲನ ವಿಜಯೇಂದ್ರ‘ಸಾಕ್ಷಿ ‘ ಕಿರುಚಿತ್ರ ಚಿತ್ರೀಕರಣ ಮುಕ್ತಾಯಮಲೆ ಮಾದೇಶ್ವರ ಬೆಟ್ಟದ ದೇವರ ದರ್ಶನ ಪಡೆದ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿ. ನರೇಂದ್ರಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ