ಕೂಡ್ಲಿಗಿ: ಪರಮ ಪೂಜ್ಯ ಗುರುಗಳಾದ ಬಸವಮೂರ್ತಿ ಕುಂಬಾರ ಗುಂಡಯ್ಯ ಮಹಾಸ್ವಾಮೀಜಿಗಳು ಕುಂಬಾರ ಗುರುಪೀಠ ಚಿತ್ರದುರ್ಗ ಇವರ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಸರ್ವಜ್ಞ ಕುಂಬಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪಟ್ಟಣದ ಚಿದಂಬರೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಸವಮೂರ್ತಿ ಕುಂಬಾರ ಗುಂಡಯ್ಯ ಮಹಾಸ್ವಾಮೀಜಿಗಳು, ಹಿಂದುಳಿದ ಕುಂಬಾರ ಸಮುದಾಯದ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ಅಗತ್ಯವಾಗಿದೆ. ಸಮುದಾಯದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಮುಂದೆ ಬರಬೇಕು. ಯುವಕರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ತಾಲೂಕಿನ ಕುಂಬಾರ ಸಮುದಾಯದ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಘವು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಸಮುದಾಯದ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ, ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಅವರು ತಿಳಿಸಿದರು.
ಕೂಡ್ಲಿಗಿ ತಾಲೂಕು ಸರ್ವಜ್ಞ ಕುಂಬಾರ ಸಂಘದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಗೌರವದ್ಯಕ್ಷರಾಗಿ, ಇಮಾಡಪುರ ತಿಪ್ಪೇರುದ್ರಪ್ಪ, ಪೂಜಾರಹಳ್ಳಿ ರಾಮಚಂದ್ರಪ್ಪ, ಅದ್ಯಕ್ಷರಾಗಿ ರಾಮದುರ್ಗ ಕೆ. ಬಿ. ಮಹಾಂತೇಶ್,ಉಪಾಧ್ಯಕ್ಷರಾಗಿ ದೇವರಾಜ್, ಕಾರ್ಯದರ್ಶಿ ಪರಶುರಾಮ್, ಖಂಜಾಂಚಿ ಮಾರೇಶ್, ಸಹಕಾರ್ಯದರ್ಶಿ ಕೆ. ಶಿವಣ್ಣ, ಸಂಘಟನಾ ಕಾರ್ಯದರ್ಶಿ ನಾಗರಾಜ್, ಮಲ್ಲೇಶಪ್ಪ, ಶ್ರೀನಿವಾಸ್, ನಿರ್ದೇಶಕರಾದ ಲೋಕೇಶ್, ಶಿವಶಂಕರಪ್ಪ, ರುದ್ರಪ್ಪ, ಸದಸ್ಯರಾಗಿ ಶ್ರೀನಿವಾಸ್, ಮಹೇಶಪ್ಪ, ಹೊನ್ನೂರಪ್ಪ, ಮಹೇಶಪ್ಪ, ಹನುಮಂತಪ್ಪ, ನಾಗೇಶ್, ಹನುಮಂತಪ್ಪ, ಯಲ್ಲಪ್ಪ, ಸಿದ್ದೇಶ್, ಸಮುದಾಯದ ಹಿರಿಯರಾದ ಶಿವರಾಮಪ್ಪ, ಸಿದ್ದಪ್ಪ ಹುಲಿಕುಂಟೆ ಸೇರಿದಂತೆ ಕಾರ್ಯಕ್ರಮದಲ್ಲಿ ಕುಂಬಾರ ಸಮುದಾಯದ ಮುಖಂಡರು, ಸಂಘದ ಸದಸ್ಯರು ಹಾಗೂ ಯುವಕರು ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.