ಮರಿಯಮ್ಮನಹಳ್ಳಿ: ಅಸ್ವಚ್ಚತೆಯಲ್ಲೂ ಸ್ವಚ್ಚತೆಗೆ ಒತ್ತು ನೀಡುವ ಪೌರಕಾರ್ಮಿಕರನ್ನು ಸಮಾಜ ಗೌರವಿಸ ಬೇಕು ಎಂದು ಪಟ್ಟಣಪಂಚಾಯತಿ ಅಧ್ಯಕ್ಷ ಆದಿಮನಿ ಹುಸೇನಬಾಷ ಹೇಳಿದರು.
ಕರ್ನಾಟಕರಾಜ್ಯ ಪೌರನೌಕರರಸಂಘ,ಪಟ್ಟಣಪಂಚಾಯತಿ ಕಾರ್ಯಾಲಯ ಸಹಯೋಗದಲ್ಲಿ,ಪಟ್ಟಣ ಪಂಚಾಯತಿ ಆವರಣದಲ್ಲಿ,ಹಮ್ಮಿಕೊಂಡ 16ನೇ ಪೌರಕಾರ್ಮಿಕರ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ವರ್ಷಪೂರ್ತಿ ನಮ್ಮೂರನ್ನು ಸ್ವಚ್ಚಗೊಳಿಸಿ ದುಡಿಯುವ ಪೌರಕಾರ್ಮಿಕರ ದಿನಾಚರಣೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಮನವಿ ಮಾಡಿದರು.

ಪ.ಪಂ.ಮುಖ್ಯಾಧಿಕಾರಿ ಗರಡಿಕಳಕ ಮಲ್ಲೇಶ್ ಮಾತನಾಡಿ,ಪೌರಕಾರ್ಮಿಕರು ಸ್ವಚ್ಚಗೊಳಿಸುವ ಕಾರ್ಯದ ಜೊತಗೆ,ನಾಗರಿಕರಿಗೆ ಜವಾಬ್ದಾರಿಗಳನ್ನು ತಿಳಿಸುವ ಮಹತ್ತರ ಜವಾಬ್ದಾರಿ ಇದೆ.ಪೌರಕಾರ್ಮಿಕರ ಕುರಿತು ಸಾರ್ವಜನಿಕರಿಗೆ ಸಂಕುಚಿತತೆ ಬೇಡ,ಅವರು ಬದುಕಿಗಾಗಿ ವೃತ್ತಿಗೆ ಬಂದವರು ಎಂದರು.ಅವರನ್ನು ಗೌರವಿಸುವ,ಗುರುತಿಸುವಿಕೆ ಸಾರ್ವಜನಿಕರಿಂದಾಗ ಬೇಕು ಎಂದರು.ಸಾರ್ವಜನಕರು ತಮ್ಮ ಕಸ ಎಸೆಯುವ ಮುನ್ನ ಯೋಚಿಸ ಬೇಕು.ಸ್ವಚ್ಚತೆಯ ನೆಪದಲ್ಲಿ ಅಸ್ವಚ್ಚತೆಯನ್ನು ನಿರ್ಮಿಸ ಬಾರದೆಂದರು.
ಇದೇ ಸಂಧರ್ಭದಲ್ಲಿ ಪೌರಕಾರ್ಮಿಕರಿಗೆ ಗೌರವಿಸಲಾಯಿತು.ಈ ಸಂಧರ್ಭದಲ್ಲಿ ನೈರ್ಮಲ್ಯ ಅಧಿಕಾರಿ ಪಂಪಾಪತಿ, ಪ.ಪಂ.ಉಪಾಧ್ಯಕ್ಷೆ ಲಕ್ಷ್ಮೀಮಂಜುನಾಥ,ಸ್ಥಾಯಿಸಮಿತಿ ಅಧ್ಯಕ್ಷೆ ಹುಲಿಗಿಬಾಯಿರುದ್ರನಾಯ್ಕ್, ಸದಸ್ಯರಾದ ಎಸ್.ಮಹಮದ್,ಮರಡಿಸುರೇಶ,ರಾಜೀವ್,ಕೆ.ಮಂಜುನಾಥ,ಪರಶುರಾಮ ಮುಖಂಡರಾದ ರುದ್ರನಾಯ್ಕ್, ಬಿ.ಸುರೇಶ, ಕೆ.ರವಿ, ರವಿಕಿರಣ್, ವೆಂಕಟೇಶ, ದುರುಗಪ್ಪ, ಪೌರಕಾರ್ಮಿಕರಾದ ಚಿದಾನಂದ, ಹನುಮಂತ ಸೇರಿದಂತೆ ಇತರರಿದ್ದರು. ಮಹಾಂತೇಶ್ ನೆಲ್ಕುದ್ರಿ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.