LIVE TV StateNationalPoliticsCrimeEntertainmentSportsEducationFINANCE & TAXATION
Districts Chitradurga | State News

ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಶಿಕ್ಷಕ ಶಿವಕುಮಾರ್ ಗೈರು

ಕರ್ತವ್ಯನಿಷ್ಠೆಯ ಪಾಠ ಹೇಳುವವರೇ ಗೈರಾದರೆ ಹೇಗೆ?

ವೆಂಕಟಾಪುರ: ಸತ್ಯ, ಶಿಸ್ತು, ಕರ್ತವ್ಯನಿಷ್ಠೆಯ ಸಂದೇಶ ಸಾರುವ ಗಾಂಧಿ ಜಯಂತಿಯಂದೇ ವೆಂಕಟಾಪುರ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಶಿವಕುಮಾರ್ ಶಾಲೆಯಲ್ಲಿ ನಡೆದ ಗಾಂಧಿ–ಶಾಸ್ತ್ರಿ ಜಯಂತಿ ಕಾರ್ಯಕ್ರಮಕ್ಕೆ ಗೈರಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

 

ರಾಷ್ಟ್ರೀಯ ಮಹತ್ವದ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಭಾಗವಹಿಸಿದ್ದ ವೇಳೆ ಸಹ ಶಿಕ್ಷಕರೊಬ್ಬರು ಗೈರಾಗಿರುವುದು ಗಮನ ಸೆಳೆದಿದೆ. ವಿದ್ಯಾರ್ಥಿಗಳಿಗೆ ಕರ್ತವ್ಯ ಮತ್ತು ಶಿಸ್ತಿನ ಪಾಠ ಹೇಳುವ ಶಿಕ್ಷಕರೇ ಶಾಲೆಯ ಪ್ರಮುಖ ಕಾರ್ಯಕ್ರಮಕ್ಕೆ ಗೈರಾಗಿರುವುದು ಯಾವ ಸಂದೇಶ ನೀಡುತ್ತದೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

 

ಗಾಂಧಿ ಜಯಂತಿಯಂತಹ ರಾಷ್ಟ್ರೀಯ ದಿನಾಚರಣೆಯ ಕಾರ್ಯಕ್ರಮಕ್ಕೆ ಶಿಕ್ಷಕರ ಹಾಜರಾತಿ ಹಾಗೂ ಭಾಗವಹಿಸುವಿಕೆ ಖಚಿತಪಡಿಸಿಕೊಳ್ಳಬೇಕಾದ ಜವಾಬ್ದಾರಿ ಶಾಲಾ ಆಡಳಿತದ ಮೇಲೂ ಇದೆ. ಹೀಗಾಗಿ ಶಿವಕುಮಾರ್ ಅವರ ಗೈರುಹಾಜರಿಗೆ ಕಾರಣವೇನು ಎಂಬುದು ಸ್ಪಷ್ಟವಾಗಬೇಕಿದೆ.

 

ಗೈರಿಗೆ ಕಾರಣವೇನು?

 

ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಗೈರಾಗಲು ಪೂರ್ವಾನುಮತಿ ಪಡೆದಿದ್ದರೇ? ರಜೆ ಮಂಜೂರಾಗಿತ್ತೇ?ಎಂಬ ಪ್ರಶ್ನೆಗಳಿಗೆ ಶಾಲಾ ಆಡಳಿತ ಸ್ಪಷ್ಟನೆ ನೀಡಬೇಕಿದೆ.

 

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಎರ್ರಿಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಆಟೋ ಬಸವರಾಜ್, ಉಪಾಧ್ಯಕ್ಷ ನರಸಿಂಹ, ಊರಿನ ಮುಖಂಡರಾದ ಜಿಎಸ್ಎಸ್ಆರ್ ಸೋಮಣ್ಣ, ಸೀತಾರಾಮಚಾರಿ, ಅಂಗಡಿ ಬಸರಾಜ್, ಗುರುಮೂರ್ತಿ, ಅತಿಥಿ ಶಿಕ್ಷಕರಾದ ಉಮೇಶ್ ಎಸ್., ಮನೋಹರ, ಶಿಲ್ಪ, ಶೃತಿ ಹಾಗೂ ಎಲ್‌ಕೆಜಿ–ಯುಕೆಜಿ ಶಿಕ್ಷಕಿಯರಾದ ಮಹಾದೇವಿ, ಶ್ವೇತಾ ಉಪಸ್ಥಿತರಿದ್ದರು.

 

ಗಾಂಧಿ ಜಯಂತಿಯಂದು ನಡೆದ ಶಾಲಾ ಕಾರ್ಯಕ್ರಮಕ್ಕೆ ಶಿಕ್ಷಕರೊಬ್ಬರು ಗೈರಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಸ್ಪಷ್ಟನೆ ನೀಡಬೇಕಿದೆ.

 

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ