22 Nov 2026, 06:13:09 PM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
LIVE TV StateNationalPoliticsCrimeEntertainmentSportsEducationFINANCE & TAXATION
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Yadagiri

ರೈತರ ಜಮೀನಿಗೆ ಟಿಸಿ ಕೂರಿಸದೆ ಇಲಾಖೆಗೆ ತಪ್ಪು ಮಾಹಿತಿ

ಜೆಸ್ಕಾಂ ಇಲಾಖೆ ಅಧಿಕಾರಿ ವೀರೇಶ್ ದಳವಾಯಿ ಗೆ ಅಮಾನತ್ತುಗೊಳಿಸುವಂತೆ ಇಇಗೆ ಮನವಿ

ಸುರಪುರ : ಹುಣಸಗಿ ತಾಲೂಕಿನ ಕೆ.ತಳ್ಳಳ್ಳಿ ಗ್ರಾಮದಲ್ಲಿ ರೈತರ ಜಮೀನಿನಲ್ಲಿರುವ ಸರ್ವೇ ನಂ 45 ರಲ್ಲಿ ಕಳೆದ 25 ದಿನಗಳ ಹಿಂದೆ 25ಕೆವಿ ಟಿ.ಸಿ. ಸುಟ್ಟಿರುವ  ಬಗ್ಗೆ ಇಲಾಖೆಯ ಟೋಲ್ ಫ್ರಿ ನಂ. 1912 ಕ್ಕೆ ದಿನಾಂಕ : 06-08-2026 ಕರೆ ಮಾಡಿ ಕಂಪ್ಲೆಂಟ್ ಕೊಟ್ಟಿರುತ್ತೇನೆ, ಆದರೆ ಸದರಿ ಹುಣಸಗಿ ಸೆಕ್ಷನ್ ಆಫೀಸರ ವೀರೇಶ್ ದಳವಾಯಿ ಯಾವುದೇ ಟಿ.ಸಿ. ಯನ್ನು ಕೂರಿಸದೆ ಟಿ.ಸಿ. ಕೂಡಿಸಿದ್ದೇವೆಂದು ದಿನಾಂಕ 21-08-2026 ರಂದು ಕಂಪ್ಲೆಂಟ್ ಕ್ಲೋಜ್ ಮಾಡಿ ರೈತರಿಗೆ ಅನ್ಯಾಯವೆಸಗಿದ್ದು ತೀವ್ರ ಖಂಡನಿಯ, ಇಂಥ ಭ್ರಷ್ಟ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಕೈಗೊಂಡು ಅಮಾನತ್ತುಗೊಳಿಸುವಂತೆ ಜೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ ಬಿಳವಾರ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

 news_1787851986_0_988.webp

 

ಮನವಿ ಪತ್ರ ಸಲ್ಲಿಸಿ ಮಾತನಾಡಿದ ಪತ್ರಕರ್ತ ರಾಘವೇಂದ್ರ ಮಾಸ್ತರ ರವರು ಕಳೆದ 25 ದಿನಗಳಿಂದ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಚೆಲ್ಲಾಟ ಆಡುತ್ತಿರುವುದು ಖಂಡನೀಯ, ಸಧ್ಯ ನಮ್ಮ ತಾಲೂಕಿನಾದ್ಯಂತ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ, ಕೊಳವೆ ಬಾವಿಗಳನ್ನು ನಂಬಿಕೊಂಡು ಬೆಸಾಯ ಮಾಡುತ್ತಿರುವ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಸಮಯಕ್ಕೆ ಸರಿಯಾಗಿ ವಿದ್ಯುತ್ ಬರದಿದ್ದರೆ ಹೇಗೆ..? ಕಳೆದ 25 ದಿನಗಳ ಹಿಂದೆ ಟಿಸಿ ಸುಟ್ಟಿರುವ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಜೊತೆಗೆ ಡಾಕೆಟ್ ನಂಬರ F060826103365 ಪಡೆದುಕೊಳ್ಳಲಾಗಿದೆ .

 

 ಕಳೆದ 20 ದಿನಗಳಿಂದ ಅಧಿಕಾರಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದು ಆಯಿಲ್ ಖಾಲಿಯಾಗಿದೆ ಎಂದು ಕುಂಟು ನೆಪ ಹೇಳುತ್ತಾ ಬಂದಿದ್ದಾರೆ.

 

 ಆದರೆ ಈ ಪ್ರಕರಣದ ಕುರಿತು ಹುಣಸಗಿ ಸೆಕ್ಷನ್ ಆಫೀಸರವರಾದ ವೀರೇಶ ದಳವಾಯಿ ಇವರು ಸ್ಥಳಕ್ಕೆ ಬಂದು ಭೇಟಿ ನೀಡಿ ಪರಿಶೀಲಿಸದೆ, ಅದರ ಕುರಿತು ಮಾಹಿತಿ ಪಡೆದುಕೊಂಡು ಹೊಸ ವಿದ್ಯುತ್ ಟಿ.ಸಿ. ಕೂಡಿಸದೆ, ಬೇರೊಬ್ಬ ಖಾಸಗಿ ವ್ಯಕ್ತಿಗೆ ಹಣಕ್ಕೆ ಮಾರಾಟ ಮಾಡಿ, ಸುಳ್ಳು ಮಾಹಿತಿ ನೀಡಿ ಸದರಿ ರೈತರ ಜಮೀನಿಗೆ ವಿದ್ಯುತ್ ಟಿ.ಸಿ. ಕೂಡಿಸಿರುತ್ತೇನೆಂದು ದಿನಾಂಕ : 21-08-2026 ರಂದು ಕಂಪ್ಲೆಂಟ್ ಕ್ಲೋಜ್ ಮಾಡಿ ರೈತರಿಗೆ ವಂಚನೆ ಮಾಡಿರುತ್ತಾರೆ. ಇದು ಅಕ್ಷಮ್ಯ ಅಪರಾಧವೆಂದು ಸಾಭೀತಾಗಿದ್ದು,

​ಕೂಡಲೇ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ಮೋಸ, ಹಾಗೂ ವಂಚನೆ ಮಾಡಿ ಭ್ರಷ್ಟಾಚಾರದಂಥ ಕೆಲಸ ಮಾಡಿರುವ ಹುಣಸಗಿ ಸೆಕ್ಷನ್ ಆಫೀಸರ ವೀರೇಶ ದಳವಾಯಿ ಇವರ ಮೇಲೆ ಕಾನೂನು ಕ್ರಮ ಜರುಗಿಸಿ ತಕ್ಷಣವೇ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

 

ಜೆಸ್ಕಾಂ ಇಲಾಖೆಯಲ್ಲಿ ಆಯಿಲ್ ಪೂರೈಕೆ ಸಮಸ್ಯೆ ಇರುವುದು ನಿಜ. ಆದರೆ ಕಂಪ್ಲೆಂಟ್ ಕ್ಲೋಜ್ ಮಾಡುವ ಅಧಿಕಾರ ಸೆಕ್ಷನ್ ಆಫೀಸರ್ ಗೆ ಇಲ್ಲ. ಯಾವ ವ್ಯಕ್ತಿ ತಮ್ಮ ಮೋಬೈಲ್ ನಂಬರ್ ನಿಂದ ಕರೆ ಮಾಡಿ ಕಂಪ್ಲೆಂಟ್ ಕೊಟ್ಟಿರುತ್ತಾರೆ ಅವರೇ ಕಂಪ್ಲೆಂಟ್ ಕ್ಲೋಜ್ ಮಾಡಬೇಕು. ಜೊತೆಗೆ ಮೋಬೈಲ್ ನಂಬರ್ ನಮೂದಾಗಿರುವುದರಿಂದ ಆ ನಂಬರ್ ಗೆ ಕರೆ ಮಾಡಿ ತಿಳಿಸಬೇಕು. ನಮ್ಮ ಅಧಿಕಾರಿಗಳಿಂದ ತಪ್ಪಾಗಿದೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು.

ರಾಜಶೇಖರ ಬಿಳವಾರ್, ಜೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಅಧಿಕಾರಿ ಸುರಪುರ.

 

ರೈತರೊಂದಿಗೆ ನಿರಂತರವಾಗಿ ಕಳ್ಳಾಟ ಆಡುತ್ತಿರುವ ಅಧಿಕಾರಿಗಳ ಚರ್ಮ ದಪ್ಪ ಆಗಿದೆ. ತಾಲ್ಲೂಕಿನಲ್ಲಿ ಪ್ರಭಾವಿ ಖಾಸಗಿ ವ್ಯಕ್ತಿಗಳಿಗೆ ಹಣಕ್ಕಾಗಿ ಟಿಸಿ ಗಳನ್ನು ಮಾರಾಟ ಮಾಡಲಾಗುತ್ತಿರುವ ವದಂತಿ ಇದೆ. ಕೂಡಲೇ ಇಂಥ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು.

ಅಯ್ಯಣ್ಣ ಹಾಲಭಾವಿ ಜಿಲ್ಲಾಧ್ಯಕ್ಷರು ರೈತ ಸಂಘ ಯಾದಗಿರಿ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆನಕಲಿ ಮತದಾರರಿಗೆ ರಕ್ಷಣೆ ನೀಡುವುದೇ ಎಸ್ಐಆರ್ ವಿರೋಧಿಗಳ ಅಜೆಂಡಾ ಅಲ್ಲವೇ?” – ಪ್ರಭಾಕರ್ ರಾಗಿ ಅಂಗಡಿಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆಹಳ್ಳಿ-ಹಳ್ಳಿಗೆ ತೆರಳಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುತ್ತಿರುವ ಡಾ. ಯೋಗೇಶ್ ಬಾಬುವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿಯಿರಿಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ